Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ಜಿಲ್ಲೆ
  • ಮಾಲಿನ್ಯಕ್ಕೆ ಬ್ರೇಕ್ : ಕೊಪ್ಪಳದ ಎರಡು ಉಕ್ಕು ಕಾರ್ಖಾನೆಗಳಿಗೆ ಬೀಗ!
ಜಿಲ್ಲೆ

ಮಾಲಿನ್ಯಕ್ಕೆ ಬ್ರೇಕ್ : ಕೊಪ್ಪಳದ ಎರಡು ಉಕ್ಕು ಕಾರ್ಖಾನೆಗಳಿಗೆ ಬೀಗ!

Spread the love

ಕೊಪ್ಪಳ:ಪರಿಸರ ಮಾಲಿನ್ಯ ಉಂಟುಮಾಡಿ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆ ತಂದಿದ್ದ ಎರಡು ಉಕ್ಕು ಕಾರ್ಖಾನೆಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಇಂದು ಕೊಪ್ಪಳ ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡ ಎರಡು ಕಾರ್ಖಾನೆಗಳನ್ನು ಬಂದ್ ಮಾಡಿ ಬೀಗ ಹಾಕಿತು.ಹಾಲವರ್ತಿ ಗ್ರಾಮದ ಸಮೀಪದಲ್ಲಿರುವ ಪಿಬಿಎಸ್ ಕಾರ್ಖಾನೆ ಹಾಗೂ ಅಲ್ಲಾನಗರ ಹತ್ತಿರದ ‘ಹೊಸಪೇಟ್ ಇಸ್ಪಾತ್’ ಕಾರ್ಖಾನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದರು.

ಪರಿಸರ ಸಂರಕ್ಷಣಾ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸಿ ವಾಯು ಮತ್ತು ಧೂಳು ಮಾಲಿನ್ಯ ಹೆಚ್ಚಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿದೆ.ಕಾರ್ಖಾನೆಗಳ ಧೂಳಿನಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರು. ಗ್ರಾಮಸ್ಥರ ಪ್ರತಿಭಟನೆ ಹಾಗೂ ಸಾರ್ವಜನಿಕರ ಒತ್ತಡದ ನಡುವೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನರೇಂದ್ರಸ್ವಾಮಿ ಹಿರೇಬಗನಾಳ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು.ಪರಿಶೀಲನೆ ಬಳಿಕ ಐದು ಕಾರ್ಖಾನೆಗಳಿಗೆ ನೋಟಿಸ್ ಜಾರಿಯಾಗಿದ್ದು, ಅದರ ಮುಂದುವರಿದ ಭಾಗವಾಗಿ ಇಂದು ಎರಡು ಕಾರ್ಖಾನೆಗಳಿಗೆ ಬೀಗ ಹಾಕಲಾಗಿದೆ. ಪರಿಸರ ಹಾನಿ ಮಾಡುವ ಕೈಗಾರಿಕೆಗಳ ವಿರುದ್ಧ ಸರ್ಕಾರದ ಕಠಿಣ ನಿಲುವು ಇದೀಗ ಸ್ಪಷ್ಟವಾಗಿದೆ.*ವರದಿ : ಶಶಿಧರ್ ಹೊಸಮನಿ,

Leave a Reply

Your email address will not be published. Required fields are marked *

Related Posts