
ಚಿಕ್ಕಮಗಳೂರು: ಅಬಕಾರಿ ನಿರೀಕ್ಷಕರು ಕಡೂರು ವಲಯದ ಅಧಿಕಾರಿಗಳು ಹಾಗೂ CIB/RPF ಮೈಸೂರು ಸಿಬ್ಬಂದಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 2 ಕೆಜಿ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಟಾಟಾನಗರದಿಂದ ಯಶವಂತಪುರಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿ ಕಡೂರು ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ವೇಳೆ ಈ ಮಾದಕ ವಸ್ತು ಪತ್ತೆಯಾಗಿದೆ. ವಶಪಡಿಸಿಕೊಂಡ ಗಾಂಜಾವನ್ನು ಸಂಬಂಧಿಸಿದ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದು, ಈ ಸಂಬಂಧ NDPS Act-1985 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಂದೀಪ್ ಎಲ್.ಸಿ., ಅಬಕಾರಿ ನಿರೀಕ್ಷಕರು, ಕಡೂರು ವಲಯ, ಆನಂದ್, CIB/RPF ಮೈಸೂರು ಹಾಗೂ ಸಿಬ್ಬಂದಿ, ಮಂಜುಳ, ಅಬಕಾರಿ ಮುಖ್ಯ ಪೇದೆ, ಹಾಗೂ ಗೃಹರಕ್ಷಕ ದಳದ ಕುಮಾರ್ ಮತ್ತು ಕಿರಣ್ ಭಾಗವಹಿಸಿದ್ದರು.ಅಧಿಕಾರಿಗಳ ಈ ಜಂಟಿ ಕಾರ್ಯಾಚರಣೆಯಿಂದ ಮಾದಕ ವಸ್ತು ಸಾಗಾಟಕ್ಕೆ ತಡೆ ಒಡ್ಡುವಲ್ಲಿ ಮಹತ್ವದ ಯಶಸ್ಸು ದೊರೆತಿದೆ.




