Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ಜಿಲ್ಲೆ
  • ಸಿಡಿಲಿನ ಅಬ್ಬರಕ್ಕೆ ಎಮ್ಮೆ, ಎತ್ತು ಬಲಿ – ರೈತರಿಗೆ ಭಾರೀ ನಷ್ಟ!
ಜಿಲ್ಲೆ

ಸಿಡಿಲಿನ ಅಬ್ಬರಕ್ಕೆ ಎಮ್ಮೆ, ಎತ್ತು ಬಲಿ – ರೈತರಿಗೆ ಭಾರೀ ನಷ್ಟ!

Spread the love

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂದು ಎಮ್ಮೆ ಮತ್ತು ಒಂದು ಎತ್ತು ಸಾವನ್ನಪ್ಪಿದ ಘಟನೆ ನಡೆದಿದೆ.

ದಮ್ಮೂರು ಗ್ರಾಮದ ನಿವಾಸಿ ವಿರುಪಣ್ಣ ಹಳ್ಳಿಕೇರಿ ಅವರಿಗೆ ಸೇರಿದ ಎಮ್ಮೆ ಸಿಡಿಲಿನ ಹೊಡೆತಕ್ಕೆ ಬಲಿಯಾಗಿದ್ದು, ಮತ್ತೊಂದು ಘಟನೆದಲ್ಲಿ ಹಗೆದಾಳ ಗ್ರಾಮದ ನೀಲಪ್ಪ ಚೂರಿ ಅವರಿಗೆ ಸೇರಿದ ಎತ್ತು ಸಹ ಸಿಡಿಲಿನ ಪರಿಣಾಮವಾಗಿ ಮೃತಪಟ್ಟಿದೆ.ಸಂಜೆ ವೇಳೆ ಸುರಿದ ಮಳೆ ಹಾಗೂ ಗುಡುಗು-ಸಿಡಿಲಿನ ಆರ್ಭಟದಿಂದ ಈ ದುರ್ಘಟನೆಗಳು ಸಂಭವಿಸಿದ್ದು, ಇದರಿಂದ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಮಾಹಿತಿ ತಿಳಿದು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸಂತ್ರಸ್ತ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ : ಶಶಿಧರ್ ಹೊಸಮನಿ, ಯಲಬುರ್ಗಾ

Leave a Reply

Your email address will not be published. Required fields are marked *

Related Posts