Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ಜಿಲ್ಲೆ
  • ಎಸ್ಸೆಸ್ಸೆಲ್ಸಿಯಲ್ಲಿ ಮಿಂಚಿದ ಜೀವಿತ: ಶೇ. 94.24 ಅಂಕ ಪಡೆದು ಶಾಲೆಗೆ ಕೀರ್ತಿ!
ಜಿಲ್ಲೆ

ಎಸ್ಸೆಸ್ಸೆಲ್ಸಿಯಲ್ಲಿ ಮಿಂಚಿದ ಜೀವಿತ: ಶೇ. 94.24 ಅಂಕ ಪಡೆದು ಶಾಲೆಗೆ ಕೀರ್ತಿ!

Spread the love

ಬೇಲೂರು:ಪಟ್ಟಣದ ಪೂರ್ಣ ಪ್ರಜ್ಞ ಶಾಲೆಯ ವಿದ್ಯಾರ್ಥಿನಿ ಜೀವಿತ ಬಿ ಎಸ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 94.24 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾಳೆ.ಒಟ್ಟು 625 ಅಂಕಗಳಲ್ಲಿ 589 ಅಂಕಗಳನ್ನು ಪಡೆದುಕೊಂಡಿರುವ ಜೀವಿತ ತನ್ನ ಪರಿಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ. ಅವಳ ಸಾಧನೆ ಶಿಕ್ಷಕರು ಹಾಗೂ ಸಹಪಾಠಿಗಳ ಮೆಚ್ಚುಗೆಗೆ ಪಾತ್ರವಾಗಿದೆ.ಜೀವಿತ ಪಟ್ಟಣದ ಗುಣಿಕೆರೆ ವೀದಿಯ ನಿವಾಸಿಯಾಗಿದ್ದು, ಗಾರೆ ಕೆಲಸ ಮಾಡುವ ಸುರೇಶ್ ಹಾಗೂ ಅನಿತ ದಂಪತಿಗಳ ಪುತ್ರಿಯಾಗಿದ್ದಾಳೆ. ಆರ್ಥಿಕ ಸವಾಲುಗಳ ನಡುವೆಯೂ ಈ ಮಟ್ಟದ ಸಾಧನೆ ಮಾಡಿರುವುದು ವಿಶೇಷವಾಗಿ ಪ್ರಶಂಸನೀಯವಾಗಿದೆ. ಕುಟುಂಬದ ಹೆಮ್ಮೆ ಮಾತ್ರವಲ್ಲದೆ, ಶಾಲೆಯ ಗೌರವವನ್ನೂ ಹೆಚ್ಚಿಸಿದೆ.ಜೀವಿತೆಯ ಸಾಧನೆಗೆ ಶಿಕ್ಷಕರು, ಸ್ನೇಹಿತರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದ್ದಾರೆ.

ವರದಿ : ನೀಲಕಂಠ ಬೇಳೂರು

Leave a Reply

Your email address will not be published. Required fields are marked *

Related Posts