
ಯಲಬುರ್ಗಾ ನಗರದಲ್ಲಿ ಇಂದು ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಯಲಬುರ್ಗಾ ಪಿಎಸ್ಐ ಶ್ರೀ ವಿಜಯ ಪ್ರತಾಪ್ ಅವರು ಚಾಲನೆ ನೀಡಿ, ಬೈಕ್ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಮಹತ್ವದ ಅರಿವು ಮೂಡಿಸಿದರು.ಈ ವೇಳೆ ಮಾತನಾಡಿದ ಅವರು, ಇತ್ತೀಚಿನ ಬಿಸಿಲಿನ ತಾಪಮಾನ ಹೆಚ್ಚಿರುವ ಕಾರಣ ಹಲವರು ಹೆಲ್ಮೆಟ್ ಧರಿಸದೆ ಸಂಚಾರ ಮಾಡುತ್ತಿರುವುದು ಕಂಡು ಬರುತ್ತಿದ್ದು, ಇದು ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದರು. ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ಇದು ಜೀವ ರಕ್ಷಕ ಸಾಧನವಾಗಿರುವುದರಿಂದ ಪ್ರತಿಯೊಬ್ಬ ಬೈಕ್ ಸವಾರರೂ ತಪ್ಪದೇ ಬಳಸಬೇಕು ಎಂದು ತಿಳಿಸಿದರು.ಇದಲ್ಲದೆ, ನಗರ ಪ್ರದೇಶದಲ್ಲಿ ವಾಹನ ಸಂಚಾರವನ್ನು ನಿಯಂತ್ರಿತ ವೇಗದಲ್ಲಿ, ವಿಶೇಷವಾಗಿ 30 ರಿಂದ 40 ಕಿ.ಮೀ. ವೇಗದಲ್ಲಿ ನಡೆಸಬೇಕು ಎಂದು ಸಲಹೆ ನೀಡಿದರು. ವಾಹನದ ಅಗತ್ಯ ದಾಖಲೆಗಳು, ಇನ್ಸುರೆನ್ಸ್ ಸೇರಿದಂತೆ ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.“ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. ನೀವು ಮುಂಜಾಗ್ರತೆ ವಹಿಸಿದರೆ ನಿಮ್ಮ ಕುಟುಂಬವೂ ಸುರಕ್ಷಿತವಾಗಿರುತ್ತದೆ,” ಎಂದು ಅವರು ಹೇಳಿದರು.ಈ ಕಾರ್ಯಕ್ರಮದಲ್ಲಿ ಶ್ರೀ ಹನುಮಂತಪ್ಪ ಬಿಂಗಿ, ಶ್ರೀ ಬಸಯ್ಯ ಸಾಲಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಶಶಿಧರ್ ಹೊಸಮನಿಕೊಪ್ಪಳ ಜಿಲ್ಲೆ, ಯಲಬುರ್ಗಾ




