ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಜಟ್ಟಗಿ ತಾಂಡಾದ ಸತೀಶ ನಾಯಕ ಅವರು ಭಾರತೀಯ ನೌಕಾಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಫೆಬ್ರವರಿ 19, 2026ರಂದು ತವರಿಗೆ ಮರಳಿದ ಹಿನ್ನೆಲೆಯಲ್ಲಿ, ಪಟ್ಟಣದಲ್ಲಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.ಮುದ್ದೇಬಿಹಾಳ ಪಟ್ಟಣದ ಬಜಾರ ಹನುಮಾನ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದವರೆಗೆ ಸಾಗಿತು. ಈ ವೇಳೆ ಯೋಧನಿಗೆ ಪುಷ್ಪವೃಷ್ಠಿ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಎರಡು ಜೆಸಿಬಿಗಳಲ್ಲಿ ನಿಂತು ಚೆಂಡು ಹೂವಿನ ಮಳೆಯನ್ನೇರಿಸಿ ವಿಶೇಷ ಸನ್ಮಾನ ಮಾಡಲಾಯಿತು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.ಈ ಮೆರವಣಿಗೆಯಲ್ಲಿ ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಕಾರ್ಗಿಲ್ ಸ್ಮಾರಕ ನಿರ್ಮಾಣ ಸಮಿತಿ ಪದಾಧಿಕಾರಿಗಳು, ಮಾಜಿ ಸೈನಿಕರ ಸಂಘದ ಸದಸ್ಯರು ಹಾಗೂ ಯೋಧನ ಕುಟುಂಬಸ್ಥರು ಭಾಗವಹಿಸಿದ್ದರು. ಜಟ್ಟಗಿ ತಾಂಡಾದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಧನಿಗೆ ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಬಂಜಾರ ಯುವ ಮುಖಂಡರು ವಿಶಾಲ್ ಚಂದ್ರಶೇಖರ್ ಲಂಬಾಣಿ, ಅಕ್ಷಯ ನಾಡಗೌಡ, ಆಕಾಶ ರಾಠೋಡ್, ಸಚಿನ್ ಚವಾಣ್, ಅನಿಲ್ ರಾಠೋಡ್, ಶಿವರಾಜ್ ರಾಠೋಡ್, ಶಿವರಾಜ್ ನಾಯಕ್, ಶಿವಾನಂದ್ ನಾಯಕ್, ಲಾಲಿಪ್ ಚವಾಣ್, ಧನರಾಜ್ ಚವಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ವರದಿ: ತಾಳಿಕೋಟಿ ತಾಲೂಕು, ಅಪ್ಪಾಜಿ ರಾಠೋಡ್





