Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ಜಿಲ್ಲೆ
  • ಕ.ರಾಜ್ಯ ಮಾನ್ಯ ರಾಜ್ಯಪಾಲರಾದ ತಾವರ್ ಚಂದ ಗೆಹ್ಲೋಟ್ ಸಾಮಾನ್ಯ ಪೊಲೀಸ್ ಕಾನ್ಸ್ಟೇಬಲ್ ಮದುವೆಗೆ ಆಗಮನ!
ಜಿಲ್ಲೆ

ಕ.ರಾಜ್ಯ ಮಾನ್ಯ ರಾಜ್ಯಪಾಲರಾದ ತಾವರ್ ಚಂದ ಗೆಹ್ಲೋಟ್ ಸಾಮಾನ್ಯ ಪೊಲೀಸ್ ಕಾನ್ಸ್ಟೇಬಲ್ ಮದುವೆಗೆ ಆಗಮನ!

Spread the love

ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರಾದ ತಾವರ್ ಚಂದ ಗೆಹ್ಲೋಟ್ ಅವರು ಸಾಮಾನ್ಯ ಪೊಲೀಸ್ ಕಾನ್ಸ್ಟೇಬಲ್ ಮದುವೆಗೆ ಆಗಮಿಸಿ ಆಶೀರ್ವದಿಸಿರುವುದು ರಾಜ್ಯದ ಜನಮನಗಳನ್ನು ಗೆದ್ದಿರುವ ಅಪರೂಪದ ಘಟಣೆ ಹೊರಹೊಮ್ಮಿದೆ.

ಬೆಂಗಳೂರುದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ರಾಜ್ಯಪಾಲರ ಭದ್ರತೆಯನ್ನು ನೋಡಿಕೊಳ್ಳುವ ಪೊಲೀಸ್ ಕಾನ್ಸ್ಟೇಬಲ್ ಪರಮಾನಂದ ಮಂಟೂರ್ ಅವರ ಮದುವೆ ಕಾರ್ಯಕ್ರಮಕ್ಕೆ ಆಹ್ವಾನ ಸ್ವೀಕರಿಸಿದ ರಾಜ್ಯಪಾಲರು, ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣಕ್ಕೆ ತೆರಳಿ ವಧೂವರರನ್ನು ಆಶೀರ್ವದಿಸಿದ್ದಾರೆ.

ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸಿಬ್ಬಂದಿಯ ವೈಯಕ್ತಿಕ ಕಾರ್ಯಕ್ರಮಕ್ಕೆ ಈ ರೀತಿಯಾಗಿ ಭಾಗವಹಿಸುವುದು ಅಪರೂಪವಾಗಿದ್ದು, ಇದು “ಎಲ್ಲರೂ ಸಮಾನರು” ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರುತ್ತದೆ.ಈ ಘಟನೆ ಕೇವಲ ಮದುವೆ ಕಾರ್ಯಕ್ರಮವಲ್ಲ, ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆ ಜೀವಂತವಾಗಿರುವುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.

ಸಾಮಾನ್ಯವಾಗಿ ರಾಜಕೀಯ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಇರುವವರು ಜನರಿಂದ ದೂರವಾಗಿರುತ್ತಾರೆ ಎಂಬ ಕಲ್ಪನೆಯನ್ನು ಇದು ಸಂಪೂರ್ಣವಾಗಿ ತಳ್ಳಿ ಹಾಕಿದೆ. ತಮ್ಮೊಂದಿಗೆ ಪ್ರತಿನಿತ್ಯ ಕೆಲಸ ಮಾಡುವ ಸಿಬ್ಬಂದಿಗಳೊಂದಿಗೆ ಆತ್ಮೀಯತೆ ಮತ್ತು ಗೌರವದಿಂದ ನಡೆದುಕೊಳ್ಳುವುದು ನಾಯಕತ್ವದ ಸಾರ್ಥಕತೆಯಾಗಿದೆ ಎಂಬುದನ್ನು ರಾಜ್ಯಪಾಲರು ತಮ್ಮ ನಡೆ ಮೂಲಕ ತೋರಿಸಿದ್ದಾರೆ.

ಮುಧೋಳ ಪಟ್ಟಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸ್ಥಳೀಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜ್ಯಪಾಲರ ಸರಳತೆ ಮತ್ತು ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪರಮಾನಂದ ಮಂಟೂರ್ ಅವರ ಕುಟುಂಬದವರಿಗೆ ಇದು ಜೀವನಪೂರ್ಣ ನೆನಪಾಗುವ ಕ್ಷಣವಾಗಿದ್ದು, ಗ್ರಾಮಸ್ಥರು ಇದನ್ನು ಹೆಮ್ಮೆಪಡುವ ಘಟನೆಯಾಗಿ ಕೊಂಡಾಡಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಈ ಘಟನೆ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದ್ದು, ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಗೌರವದ ಮೌಲ್ಯಗಳನ್ನು ಬಲಪಡಿಸುವ ಸಂದೇಶ ನೀಡಿದೆ. ರಾಜ್ಯಪಾಲರ ಈ ನಡೆ ಸಮಾಜಕ್ಕೆ ಆದರ್ಶಪ್ರಾಯವಾಗಿದ್ದು, ಸಾರ್ವಜನಿಕ ವಲಯದಲ್ಲಿ ಉತ್ತಮ ಸಂದೇಶವನ್ನು ಹರಡಿದೆ.ಕರ್ನಾಟಕದ ಜನತೆಯ ಪರವಾಗಿ ರಾಜ್ಯಪಾಲರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *

Related Posts