Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ಜಿಲ್ಲೆ
  • ಜೋಕಾಲಿ ಆಟವೇ ಜೀವಕಳೆದುದೋ… 9 ವರ್ಷದ ಬಾಲಕಿ ದಾರುಣ ಅಂತ್ಯ..!
ಜಿಲ್ಲೆ

ಜೋಕಾಲಿ ಆಟವೇ ಜೀವಕಳೆದುದೋ… 9 ವರ್ಷದ ಬಾಲಕಿ ದಾರುಣ ಅಂತ್ಯ..!

Spread the love

ಶಿವಮೊಗ್ಗ: ಜೋಕಾಲಿ ಆಡುವ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು 9 ವರ್ಷದ ಬಾಲಕಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ನಡೆದಿದೆ.ಶಿವಮೊಗ್ಗದ ವಿದ್ಯಾನಗರ ನಿವಾಸಿ ಪ್ರಣಮ್ಯ (9) ಮೃತ ದುರ್ದೈವಿ. ಬೇಸಿಗೆ ರಜೆ ಕಳೆಯಲು ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಘಟನೆ ನಡೆದ ದಿನ ಮನೆಯೊಳಗಿನ ಕೋಣೆಯಲ್ಲಿ ಒಬ್ಬಳೇ ಇದ್ದು, ಪಂಚೆಯನ್ನು ಬಳಸಿ ಜೋಕಾಲಿ ಕಟ್ಟಿಕೊಂಡು ಆಟವಾಡುತ್ತಿದ್ದಳು.ಈ ವೇಳೆ ಆಕಸ್ಮಿಕವಾಗಿ ಪಂಚೆ ಕುತ್ತಿಗೆಗೆ ಸಿಲುಕಿ ಕುಣಿಕೆ ಬಿಗಿದ ಪರಿಣಾಮ ಉಸಿರುಗಟ್ಟಿ ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಘಟನೆ ಮೂರು ದಿನಗಳ ಹಿಂದೆಯೇ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ.ರಜೆಯ ಸಡಗರದಲ್ಲಿ ಕಾಲ ಕಳೆಯಬೇಕಿದ್ದ ಬಾಲಕಿಯ ಅಕಾಲಿಕ ಮರಣ ಕುಟುಂಬದವರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Related Posts