Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ಜಿಲ್ಲೆ
  • ತುಮಕೂರು: ನಾಪತ್ತೆ ಸುದ್ದಿ ಗಾಳಿಸುದ್ದಿ – ಮಹಿಳಾ ಪಿಎಸ್‌ಐ ಮಂಗಳಮ್ಮ ಸುರಕ್ಷಿತ, ಕರ್ತವ್ಯಕ್ಕೆ
ಜಿಲ್ಲೆ

ತುಮಕೂರು: ನಾಪತ್ತೆ ಸುದ್ದಿ ಗಾಳಿಸುದ್ದಿ – ಮಹಿಳಾ ಪಿಎಸ್‌ಐ ಮಂಗಳಮ್ಮ ಸುರಕ್ಷಿತ, ಕರ್ತವ್ಯಕ್ಕೆ

Spread the love

ತುಮಕೂರು, ಏಪ್ರಿಲ್ 7:ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಮಹಿಳಾ ಪಿಎಸ್‌ಐ ಮಂಗಳಮ್ಮ ಅವರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ವಿವಿಧ ಪತ್ರಿಕೆಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು. ಆದರೆ ಈ ಕುರಿತಾಗಿ ಇದೀಗ ನಿಜಸ್ಥಿತಿ ಬಹಿರಂಗವಾಗಿದೆ.ಪ್ರಾಥಮಿಕ ವರದಿಗಳಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ಮಂಗಳಮ್ಮ ಅವರು ಮನೆಯಿಂದ ಹೊರಟಿದ್ದಾರೆ ಎಂಬ ಮಾಹಿತಿ ಪ್ರಕಟವಾಗಿತ್ತು.ಆದರೆ, ಈ ಮಾಹಿತಿ ತಪ್ಪಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ವಾಸ್ತವವಾಗಿ, ಕರ್ತವ್ಯದಲ್ಲಿದ್ದ ವೇಳೆ ಉಂಟಾದ ಕೆಲಸದ ಒತ್ತಡದಿಂದಾಗಿ ಹಾಗೂ ಹಿರಿಯ ಅಧಿಕಾರಿಯೊಬ್ಬರಿಂದ ತೀವ್ರ ತರಾಟೆಗೆ ಒಳಗಾದ ಹಿನ್ನೆಲೆ, ಮನಶಾಂತಿಯಿಗಾಗಿ ಮಂಗಳಮ್ಮ ಅವರು ತಾತ್ಕಾಲಿಕವಾಗಿ ಠಾಣೆಯಿಂದ ಹೊರಗೆ ತೆರಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಅವರು ಸುರಕ್ಷಿತವಾಗಿ ಮನೆಗೆ ಮರಳಿದ್ದು, ಪ್ರಸ್ತುತ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ, ನಾಪತ್ತೆ ಕುರಿತು ಮಗಳಿಂದ ನೀಡಲಾದ ದೂರು ಆಧರಿಸಿ ಪೊಲೀಸರು ಹುಡುಕಾಟ ನಡೆಸಿದರೂ, ನಂತರ ಮಂಗಳಮ್ಮ ಅವರು ಸುರಕ್ಷಿತವಾಗಿರುವುದು ದೃಢಪಟ್ಟಿದೆ.ಅದರಿಂದ, ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾದ ಕೌಟುಂಬಿಕ ಕಲಹದ ಮಾಹಿತಿ ತಪ್ಪು ಹಾಗೂ ದಾರಿತಪ್ಪಿಸುವಂತದ್ದು ಎಂದು ತಿಳಿದುಬಂದಿದ್ದು, ಸಾರ್ವಜನಿಕರು ಈ ಕುರಿತು ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

Related Posts