Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ರಾಜಕೀಯ
  • ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ದೇವರಲ್ಲಿ ಹರಿಕೆ.
ರಾಜಕೀಯ

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ದೇವರಲ್ಲಿ ಹರಿಕೆ.

Spread the love

ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ನಡೆದ ಶ್ರೀ ಅರಣ್ಯ ಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವದ ವೇಳೆ ವಿಭಿನ್ನ ಘಟನೆ ಗಮನಸೆಳೆದಿದೆ. ಭಕ್ತನೊಬ್ಬ ಬಾಳೆಹಣ್ಣಿನ ಮೇಲೆ “ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ” ಎಂದು ಬರೆದು ದೇವರಿಗೆ ಹರಿಕೆ ಸಲ್ಲಿಸಿದ್ದಾನೆ.ಪಲ್ಲಕ್ಕಿ ಮೆರವಣಿಗೆಯ ಸಂದರ್ಭದಲ್ಲೇ ಬಾಳೆಹಣ್ಣು ಎಸೆದು ದೇವರಲ್ಲಿ ಬೇಡಿಕೆ ಇಟ್ಟ ಘಟನೆ ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಹರಿಕೆಯನ್ನು ಸಲ್ಲಿಸಿದವರು ಖೇಮಲಾಪೂರ ಗ್ರಾಮದ ಸಿದ್ದು ಸನದಿ ಎಂದು ತಿಳಿದುಬಂದಿದೆ.ಇದಕ್ಕೂ ಮೊದಲು ಕೂಡ ಸಿದ್ದು ಸನದಿ ಅವರು ಕುಡಚಿ ಕ್ಷೇತ್ರದ ಶಾಸಕರಾಗಬೇಕೆಂದು ಮಹೇಂದ್ರ ತಮ್ಮಣ್ಣವರ ಪರವಾಗಿ ಹರಿಕೆ ಇಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಜಾತ್ರಾ ಮಹೋತ್ಸವದಲ್ಲಿ ಈ ಘಟನೆ ವಿಶೇಷ ಗಮನಸೆಳೆದಿದ್ದು, ರಾಜಕೀಯ ವಲಯದಲ್ಲಿಯೂ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

Related Posts