
Karnataka ರಾಜ್ಯದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವ ಆರೋಪಗಳು ಗಂಭೀರ ರಾಜಕೀಯ ತಿರುವು ಪಡೆದಿವೆ. ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಸ್ವಚ್ಛತೆ ಸಮಸ್ಯೆ ತೀವ್ರಗೊಂಡಿದ್ದು, ಚರಂಡಿಗಳ ಸ್ವಚ್ಛತೆ ಇಲ್ಲದೆ ಕಸಕಡ್ಡಿ ಗುಡ್ಡೆಯಾಗಿ ಕೂಡಿಕೊಂಡಿದೆ. ಪರಿಣಾಮವಾಗಿ ಗ್ರಾಮಸ್ಥರು ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಗ್ರಾಮದಲ್ಲಿ ಕಳೆದೆರೆಡು ವರ್ಷಗಳ ಇಂದೆಯಷ್ಟೇ ಒಬ್ಬ ಮಹಿಳೆ ಮೃತಪಟ್ಟಿರುವ ಘಟನೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಜನರಲ್ಲಿ ಆಕ್ರೋಶ ಹುಟ್ಟಿಸಿದೆ. “ಜನರು ತೆರಿಗೆ ಪಾವತಿಸಿಲ್ಲ, ಅನುದಾನವಿಲ್ಲ; ಆದ್ದರಿಂದ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ” ಎಂಬ ಪಂಚಾಯತಿ ಪಿಡಿಒ ಶ್ರೀಮತಿ ರೂಪ ಅವರ ಹೇಳಿಕೆ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ತೆರಿಗೆ ಸಂಗ್ರಹ ಮತ್ತು ಸ್ವಚ್ಛತಾ ವ್ಯವಸ್ಥೆ ಸುಧಾರಿಸುವ ಜವಾಬ್ದಾರಿ ಪಂಚಾಯತಿಗೇ ಸೇರಿದೆ ಎಂಬ ಅಭಿಪ್ರಾಯ ಗ್ರಾಮಸ್ಥರದು.ಗ್ರಾಮದ ಅನೇಕರು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತ ಬೇರೆ ಬೇರೆ ಜಿಲ್ಲೆಗಳ ಆಸ್ಪತ್ರೆಗಳಿಗೆ ಅಲೆದಾಡುತ್ತಿರುವ ಪರಿಸ್ಥಿತಿ ಎದುರಾಗಿದೆ. ಆದರೂ ಕೂಡ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವುದೇ ತುರ್ತು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ಅನುದಾನ ಕೊರತೆ” ಎಂಬ ಕಾರಣವನ್ನು ಮುಂದಿಟ್ಟಿರುವುದನ್ನು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿ, ಇದು ನಿರ್ಲಕ್ಷ್ಯಕ್ಕೆ ನೀಡುತ್ತಿರುವ ನೆಪ ಎಂದು ಹೇಳಿದ್ದಾರೆ.
ಇದರ ನಡುವೆ ಗ್ರಾಮ ಸಮೀಪದಲ್ಲೇ ಕೋಳಿ ಫಾರಂ ನಡೆಸಲು ಅನುಮತಿ ನೀಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ನಿಯಮಾನುಸಾರ ಕೋಳಿ ಫಾರಂ ಗ್ರಾಮದಿಂದ (ಜನವಾಸಸ್ಥಳದಿಂದ) ಕನಿಷ್ಠ 1 ಕಿಮೀ ದೂರದಲ್ಲಿರಬೇಕೆಂಬ ಆದೇಶ ಇದ್ದರೂ ಅದನ್ನು ಪಾಲಿಸದೆ ಅನುಮತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಫಾರಂನಿಂದ ದುರ್ವಾಸನೆ ಹೆಚ್ಚಾಗಿ, ನೊಣಗಳ ಸಮಸ್ಯೆ ತೀವ್ರಗೊಂಡಿದ್ದು ಸುಮಾರು 25ಕ್ಕು ಹೆಚ್ಚು ಮಕ್ಕಳು ಮತ್ತು ವಯಸ್ಕರಿಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಘಟನೆ ರಾಜಕೀಯವಾಗಿ ದೊಡ್ಡ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸುತ್ತಿವೆ. ವಿರೋಧ ಪಕ್ಷದ ಮುಖಂಡರು ಮತ್ತು ಸ್ಥಳೀಯ ನಾಯಕರು ಪಂಚಾಯತಿ ಅಧ್ಯಕ್ಷರು ಹಾಗೂ ಆಯ್ಕೆಯಾದ ಸದಸ್ಯರ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. “ಜನರ ಆರೋಗ್ಯ ಕಾಪಾಡುವುದು ಪಂಚಾಯತಿಯ ಪ್ರಾಥಮಿಕ ಕರ್ತವ್ಯ. ಅದರಲ್ಲಿ ವಿಫಲವಾದರೆ ಅಧಿಕಾರದಲ್ಲಿರಲು ನೈತಿಕ ಹಕ್ಕಿಲ್ಲ” ಎಂದು ಕೆಲವರು ಹೇಳಿದ್ದಾರೆ.ಗ್ರಾಮದಲ್ಲಿ ತುರ್ತು ಸ್ವಚ್ಛತಾ ಅಭಿಯಾನ ಕೈಗೊಳ್ಳಬೇಕು, ಚರಂಡಿಗಳನ್ನು ಸ್ವಚ್ಛಗೊಳಿಸಿ ಫಾಗಿಂಗ್ ಹಾಗೂ ಔಷಧ ಸಿಂಪಡಣೆ ಮಾಡಬೇಕು, ಕೋಳಿ ಫಾರಂ ಅನುಮತಿಯನ್ನು ಮರುಪರಿಶೀಲಿಸಬೇಕು ಎಂಬ ಬೇಡಿಕೆಗಳು ಕೇಳಿಬಂದಿವೆ. ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ತಕ್ಷಣ ಹಸ್ತಕ್ಷೇಪ ಮಾಡಿ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಲಿಂಗಾಪುರ ಗ್ರಾಮ ಪಂಚಾಯತಿಯ ಈ ನಿರ್ಲಕ್ಷ್ಯ ಪ್ರಕರಣ ಮುಂದಿನ ಸ್ಥಳೀಯ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜನರ ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳ ವಿಷಯದಲ್ಲಿ ಜವಾಬ್ದಾರಿತನ ತೋರದಿದ್ದರೆ ಮುಂದಿನ ಚುನಾವಣೆಯಲ್ಲಿ ಜನ ಮತ ನೀಡುವ ಮುಖಾಂತರ ತೀರ್ಪು ನೀಡಲಿದ್ದಾರೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ.
ಅತೀ ಶೀಘ್ರದಲ್ಲೇ ಲಿಂಗಾಪುರ ಲಿಂಗಾಪುರ ಜನತೆ ಆಯ್ಕೆ ಮಾಡಿದ ಗ್ರಾಮ ಪಂಚಾಯತಿ ಸದಸ್ಯನ ಮಕ್ಮಲ್ ಟೋಪಿಯ ಭಾಗ 1…!? ನಿಮ್ಮ ಮುಂದೆ…
ಎದೆ ಸೀಳಿದರು ನಾಲ್ಕು ಅಕ್ಷರಜ್ಞಾನ ಇಲ್ಲದ ಹಾಕಿರುವುದು ಲಕ್ಷ ಲಕ್ಷ ಪಂಗನಾಮ, ಇದಕ್ಕೆ ಲಿಂಗಾಪುರ ಪಂಚಾಯತಿಯ ಯಾವ ಅಧಿಕಾರಿಯ ಅಭಯ ಅಸ್ತ..?




