ಮಳವಳ್ಳಿ ಪಟ್ಟಣದಲ್ಲಿ ಕೋಟೆ ಶ್ರೀಕಾಳಿಕಾಂಭ ದೇವಸ್ಥಾನ ಶ್ರೀ ಕಾಳಿಕಾಂಭ ದಿವ್ಯ ರಥೋತ್ಸವ ಬಲು ವಿಜೃಂಭಣೆಯಿಂದ ನಡೆಸಲಾಯಿತು.
ಶ್ರೀ ಕಾಳಿಕಾಂಭ ಉತ್ಸವಮೂರ್ತಿಯನ್ನು ರಥದ ಮೇಲಿಟ್ಟು ಪಟ್ಟಣದ ಪ್ರಮುಖ ಬೀದಿಗಳ ಮೆರವಣಿಗೆ ನಡೆಸಲಾಯಿತು.ಈ ವೇಳೆ ವಿಶ್ವಕರ್ಮ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಪ್ರಕಾಶ್ ಮಾತನಾಡಿ, ಪ್ರತಿವರ್ಷದಂತೆ ಶಿವರಾತ್ರಿ ಮಾರನೇ ದಿನ ಶ್ರೀ ಕಾಳಿಕಾಂಭ ರಥೋತ್ಸವ ನಡೆಯಲಿದ್ದು, ಎಲ್ಲಾ ಜನಾಂಗ ಸೇರಿ ಈ ರಥೋತ್ಸವದಲ್ಲ ಪಾಲ್ಗೋಡಿದ್ದು, ಸರ್ವರಿಗೂ ಶ್ರೀ ಕಾಳಿಕಾಂಭ ದೇವಿ ಆರೋಗ್ಯ ಆಯಸ್ಸು ಕರುಣಿಸಲಿ ಎಂದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಹಿರಿಯ ಮುಖಂಡಕಮಲ್ ಚಾರ್ ಕೃಷ್ಣಾಚಾರ್, ಎಸ್. ವಿ ಕಾಂತರಾಜು, ಇಂದ್ರಚಾರ್, ಮಲ್ಲಿಕಾರ್ಜುನ,ರಾಚಪ್ಪಾಜಿ, ಯುವಘಟಕ ಅಧ್ಯಕ್ಷ ಸತೀಶ್
ಕಿರುಗಾವಲು ಹೋಬಳಿ ಅಧ್ಯಕ್ಷ ಶ್ರೀನಿವಾಸ್ , ಬಿಜಿಪುರ ಹೋಬಳಿ ಬಸವಣ್ಣಚಾರ್, ಹಲಗೂರು ಹೋಬಳಿ ಅಧ್ಯಕ್ಷ ಶ್ರೀನಿವಾಸ್ ಚಾರ್, ಕಾಳಿಕಾಂಭ ಸೇವಾಟ್ರಸ್ಟ್,
ವಿಶ್ವ ಕರ್ಮ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು




