Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ಜಿಲ್ಲೆ
  • ರೊಕ್ಕಾ ತೆಗೆದುಕೊಂಡು ಟಿಕೆಟ್ ಕೊಡದ ಕಂಡಕ್ಟರ್ – ಪ್ರಯಾಣಿಕರ ಆಕ್ರೋಶ….!
ಜಿಲ್ಲೆ

ರೊಕ್ಕಾ ತೆಗೆದುಕೊಂಡು ಟಿಕೆಟ್ ಕೊಡದ ಕಂಡಕ್ಟರ್ – ಪ್ರಯಾಣಿಕರ ಆಕ್ರೋಶ….!

Spread the love

ಚಿಕ್ಕೋಡಿ ವಿಭಾಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಂಭೀರ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ. ನಿಪ್ಪಾಣಿ ಇಂದ ಮಹಾರಾಷ್ಟ್ರದ ಹುಪರಿ ಕಡೆಗೆ ಹೋಗುತ್ತಿದ್ದ ಬಸ್‌ನಲ್ಲಿ ಕಂಡಕ್ಟರ್ ಪ್ರಯಾಣಿಕರಿಂದ ರೊಕ್ಕಾ ಹಣ ಪಡೆದು ಟಿಕೆಟ್ ನೀಡದೆ ಪ್ರಯಾಣ ಮಾಡಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಪ್ರಯಾಣಿಕರು ಹೇಳುವ ಪ್ರಕಾರ, “ರೊಕ್ಕಾ ಕೊಡ್ರಿ, ಟಿಕೆಟ್ ಕೇಳ್ಬೇಡಿ” ಎಂದು ಹೇಳಿ ಹಣ ಪಡೆದು ಟಿಕೆಟ್ ನೀಡದೇ ಬಸ್‌ನ್ನು ಮಹಾರಾಷ್ಟ್ರದ ಹುಪರಿ ತನಕ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.ಇನ್ನೂ ಆಶ್ಚರ್ಯಕರ ವಿಷಯವೆಂದರೆ, ಅದೇ ಬಸ್‌ನ್ನು ಪರಿಶೀಲನೆ ಮಾಡಲು ಬಂದ ಚೆಕ್ಕರ್‌ಗಳು ಸಹ ಸರಿಯಾದ ಡ್ರೆಸ್ ಧರಿಸದೇ ಬಂದಿದ್ದರೆಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಈ ಘಟನೆ ಸರಕಾರಿ ಸಾರಿಗೆ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದ್ದು, ಸರಕಾರಿ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಕೆಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಈ ಕುರಿತು ಮೇಲಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಈಗ ಕಾದು ನೋಡಬೇಕಾಗಿದೆ.

ವರದಿ: ಆನಂದ ಕಾಂಬಳೆಜನಶ್ರೀ ನ್ಯೂಸ್, ಚಿಕ್ಕೋಡಿ

Leave a Reply

Your email address will not be published. Required fields are marked *

Related Posts